ಯುಎಸ್ಬಿ ಟೂಥ್ ಬ್ರಶ್ ಬಂದಿದೆ ಗೊತ್ತಾ?


ಅಲ್ಲಾ ಸ್ವಾಮಿ, ಕಾಲ ಎಲ್ಲಿಗೆ ಬಂತು ಅಂತೀನಿ! ಮನುಷ್ಯ ತನ್ನ ಕೆಲ್ಸಗಳನ್ನು ತಾನೇ ಮಾಡಿಕೊಳ್ಳುವುದರಿಂದ ವಿಮುಖನಾಗುತ್ತಲೇ ಇದ್ದಾನೆ. ಅಥಾ೯ತ್ ಪಕ್ಕಾ ಸೋಮಾರಿಯಾಗುತ್ತಿದ್ದಾನೆ. ಬಟ್ಟೆ ತೊಳೆಯೋದಕ್ಕೂ ಮೆಷಿನ್ ಬೇಕು. ನಾಲ್ಕೆಜ್ಜೆ ಇಟ್ಟರೆ ತಲುಪಬಹುದಾದಂಥ ಸ್ಥಳಗಳಿಗೆ ತಲುಪೋದಕ್ಕೂ ಮೆಷಿನ್ ಬೇಕು. ಮನೆಕೆಲಸಗಳನ್ನು ಮಾಡ್ಕೊಡೋದಕ್ಕೂ ಒಂದು ರೋಬಟ್ ಮೆಷಿನ್ನು! ಇದುವರೆಗೆ ಈ ಮನುಷ್ಯ ತನ್ನ ಹಲ್ಲುಗಳನ್ನು ತಾನೇ ಉಜ್ಕೋತಾ ಇದ್ದ. ಇನ್ನೂ ಆ ಕೆಲ್ಸ ಕೂಡಾ ಆತ ಮಾಡೋಲ್ಲ. ಸುಮ್ನೇ ಬಾಯಿ "ಆ..." ಮಾಡಿಕೊಟ್ರೆ ಸಾಕು ಮೆಷಿನ್ನು ಹಲ್ಲುಜ್ಜುತ್ತೆ!


ಆಶ್ಚಯ೯ ಬೇಡ, ಇದು ನಿಜ. ಇಂಥದ್ದೊಂದು ಟೂಥ್ ಬ್ರಶ್ ಮೆಷಿನ್ನಿನ ಬಗ್ಗೆ ಅಂತಜಾ೯ಲದಲ್ಲಿ ಮಾಹಿತಿ ಸಿಕ್ಕಾಗ ಅದನ್ನು ನನ್ನ ಮಿತ್ರರಿಗೂ ಹೇಳ್ಬೇಕು ಅನ್ನಿಸ್ತು ನೋಡಿ. ನಿಮ್ಗೆ ಯುಎಸ್ಬಿ ಬ್ಲೂಟೂಥ್, ಯುಎಸ್ಬಿ ಮೌಸ್, ಯುಎಸ್ಬಿ ಕೀಬೋಡ್೯.... ಇಂಥ ಕಂಪ್ಯೂಟರ್ ಭಾಷೆ ಕೇಳಿ ಗೊತ್ತು. ಇದೇ ಥರ ಈಗ ಯುಎಸ್ಬಿ ಟೂಥ್ ಬ್ರಶ್ ಬಂದಿದೆ. ಹಾಗಂತ ಇದೇನೂ ಕಂಪ್ಯೂಟರ್, ಲ್ಯಾಪ್ ಟಾಪ್ ಇಂಥ ಕಂಪ್ಯೂಟರ್ ಕುಟುಂಬದ ಮೆಷಿನ್ನುಗಳ ಹಲ್ಲು ಉಜ್ಜೋದಕ್ಕೆ ಇರುವಂಥದ್ದಲ್ಲ. ಸಾಕ್ಷಾತ್, ಈ ಮೆಷಿನ್ನುಗಳನ್ನೆಲ್ಲ ಕಂಡುಹಿಡಿದಂಥ ಮನುಷ್ಯನ ಹಲ್ಲುಗಳನ್ನೇ ಉಜ್ಜೋದಕ್ಕೆ ಇರುವಂಥದ್ದು.

ಅಂದಹಾಗೆ, ಈ ಟೂಥ್ ಬ್ರಶ್ಶನ್ನು ಕಂಡುಹಿಡಿದದ್ದು ಸಾಧಾರಣ ಕಂಪನಿಯಲ್ಲ, ಜಗತ್ತಿನಾದ್ಯಂತ ಅತ್ಯಂತ ಪ್ರಖ್ಯಾತಿ ಪಡೆದಿರುವಂಥ ಫಿಲಿಪ್ಸ್ ಕಂಪನಿ. ಈ ಬ್ರಶ್ ಹೆಸ್ರು ಡೈಮಂಡ್ ಕ್ಲೀನ್ ಎಚ್ಚೆಕ್ಸ್ 9332. ಏರ್ ಫ್ಲೋಸ್ ತಂತ್ರಜ್ಞಾನವನ್ನು ಹೊಂದಿರುವ ಈ ಬ್ರಶ್ ಪ್ರತಿ ನಿಮಿಷಕ್ಕೆ 31,000 ಬ್ರಶ್ ಸ್ಟ್ರೋಕ್ಸ್ ಹೊಂದಿದೆ. ಅಂದರೆ, ಪ್ರತಿ ನಿಮಿಷಕ್ಕೆ 31,000 ಬಾರಿ ಈ ಇದು ಅತ್ತಿಂದಿತ್ತ ಚಲಿಸುತ್ತದೆ (ಬ್ರೆಶ್ ನ ಸಿಂಥೆಟಿಕ್ ಫೈಬರ್ ಬ್ರಿಸಲ್ ಗಳು ಮಾತ್ರ ಚಲಿಸುತ್ತವೆ). ಈ ಬ್ರಶ್ ಉಯೋಗಿಸಿದ್ರೆ 14 ದಿನಗಳಲ್ಲಿ ವಸಡಿನ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾದ್ದಾರೆ ಇದರ ಉತ್ಪಾದಕರು.

ಇದರಲ್ಲಿ ಇನ್ನೂ ಒಂದು ಸೌಲಭ್ಯ ಇದೆಯಂತೆ. ಅದು- ಚಾಜಿ೯0ಗ್ ಗ್ಲಾಸ್! ಈ ಗ್ಲಾಸ್ ಒಳಗೆ ಬ್ರಶ್ ಇಟ್ಟು ಅದನ್ನು ಯುಎಸ್ಬಿ ಕೇಬಲ್ ಮೂಲಕ ಚಾಜಿ೯ಗೆ ಇಟ್ಟರೆ ಚಾಜ್೯ ಫುಲ್ ಆದ ತಕ್ಷಣ ಅದು ಸೂಚನೆ ಕೊಡುತ್ತದಂತೆ. ಏರ್ ಫ್ಲೋಸ್ ತಂತ್ರಜ್ಞಾನದ ಮೂಲಕ ಈ ಬ್ರಶ್ ಹಲ್ಲುಗಳ ಮೇಲೆ ಗಂಟೆಗೆ 45 ಮೈಲಿ ವೇಗದಲ್ಲಿ ನೀರು ಮತ್ತು ಗಾಳಿಯ ಸಂಯುಕ್ತವನ್ನು ಸಿಂಪಡಿಸುತ್ತದೆಯಂತೆ. ಇದರಿಂದಾಗಿ ಹಲ್ಲು ಹೆಚ್ಚು ಸ್ವಚ್ಛವಾಗುತ್ತದೆ ಎನ್ನುತ್ತಂದೆ ಕಂಪನಿ.


ಬೊಜ್ಜು ಕಡಿಮೆಯಾಗಬೇಕಾದರೆ ವ್ಯಾಯಾಮ ಮಾಡ್ಬೇಕು. ದೇಹಕ್ಕೆ ಕೆಲ್ಸ ಕೊಡ್ಬೇಕು ಅಂತೆಲ್ಲ ಹೇಳ್ತೀವಿ. ಆದರೆ ಹಲ್ಲುಜ್ಜೋದಕ್ಕೂ ಮೆಷಿನ್ ಬಂದ್ರೆ ಜನ ಇನ್ನೆಷ್ಟು ಬೊಜ್ಜುವಂತರಾಗಲಿಕ್ಕಿಲ್ಲ? ಅಂಗವಿಕಲರಿಗೆ ಇಂಥ ತಂತ್ರಜ್ಞಾನಗಳಿಂದ ಪ್ರಯೋಜನ ಸಿಗಬಹುದು ನಿಜ. ಆದ್ರೆ ಇಂಥ ಯಾವುದೇ ತಂತ್ರಜ್ಞಾನ ಬಂದ್ರೂ ಅದನ್ನು ಹೆಚ್ಚು ಬಳಸೋದು ಎಲ್ಲಿ ನಮ್ಮ ಮೈ, ಕೈ ಸವೆದು ಹೋಗುತ್ತೋ ಅಂತ ಭಾವಿಸುವ ಜನ!

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು